ದ್ರೋಣಾಚಾರ್ಯ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡುವುದರ ಮೂಲಕ ಸ್ಪರ್ಧಾರ್ಥಿಗಳಿಗೆ ಸರಿಯಾದ ಅಧ್ಯಯನ ಸಂಪನ್ಮೂಲಗಳನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಸ್ಪರ್ಧಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ವರ್ಗದವರು ಮತ್ತು ನುರಿತ ಉಪನ್ಯಾಸಕರ ಬಳಗವೇ ದ್ರೋಣಾಚಾರ್ಯ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಜೊತೆಗೆ ಸಮರ್ಪಕ ಅಧ್ಯಯನಕ್ಕೆ ಸರಿಯಾದ ಮಾರ್ಗದರ್ಶನ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಪ್ರಕಾಶಕರ ಪುಸ್ತಕಗಳೂ ಸಹ ದೊರೆಯುತ್ತವೆ ಹಾಗೂ ಹುಸೇನಪ್ಪ ನಾಯಕ ಅಕಾಡೆಮಿ ಯೂಟ್ಯೂಬ್ ಚಾನಲ್ ಸೇರಿದಂತೆ ಹಲವಾರು ಉಪನ್ಯಾಸಕರ ಮಾರ್ಗದರ್ಶನದ ಸಂಯೋಗದಲ್ಲಿ ದ್ರೋಣಾಚಾರ್ಯ ಅಕಾಡೆಮಿ ಮುಂದಿನ ಹೆಜ್ಜೆಗಳನ್ನು ಇಡುತ್ತಿದೆ.